ಸ್ನೇಕ್ನಾಗ ಚಿತ್ರೀಕರಣ ಪೂರ್ಣ
Send us your feedback to audioarticles@vaarta.com
ಮಾಧವ ಮೂವೀಸ್ ಲಾಂಛನದಲ್ಲಿ ಗೋಪಾಲ ಕುಷ್ಠಗಿ ಅವರು ನಿರ್ಮಿಸುತ್ತಿರುವ ಸ್ನೇಕ್ನಾಗ` ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿ ಮುವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಯೋಗೇಶ್ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಹಿತಾಚಂದ್ರಶೇಖರ್, ಗಿರೀಶ್ ಕಾರ್ನಾಡ್, ಸಿಹಿಕಹಿ ಚಂದ್ರು, ಕರಿಸುಬ್ಬು, ಕ್ರಿಶ್, ಅಪೇಕ್ಷ, ಪಾಯಲ್ ಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಉಮಾರಾವ್ ಅವರು ಬರೆದಿರುವ ಕಥೆಗೆ ಪ್ರತಿಭಾನಂದಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆಯನ್ನು ಪ್ರತಿಭಾ ಅವರೇ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸುರೇಶ್ ಸಂಕಲನ, ಅದ್ವೈತ ಛಾಯಾಗ್ರಹಣ ವಸಂತ ಕುಲಕರ್ಣಿ ಕಲಾ ನಿರ್ದೇಶನ, ಎನ್.ಕೆ.ಲೀನ್ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ಭಟ್, ಗೋಪಾಲ ವಾಜಪೇಯಿ ಹಾಗೂ ಪ್ರತಿಭಾನಂದಕುಮಾರ್ ಬರೆದಿದ್ದಾರೆ.
Follow us on Google News and stay updated with the latest!
-
Contact at support@indiaglitz.com
Comments